Sunday, August 9, 2015

ನಿನಾದ !!!

ನೀರವತೆಯಲಿ  ನಿನಾದ
ಕೇಳಿ ಬಂದಿದೆ ಈಗ
ಸಂತೋಷದ ಸವಿ ನುಡಿಯೋ
ಮೌನ ರಾಗದ  ಆದಿಯೋ

ನಾಚಿ ನೀರಾಯಿತು ಸಪ್ತಸ್ವರ
ಆ ನಿನಾದದ ದನಿ ಕೇಳಿ
ಹಾರುವ ಹಕ್ಕಿ ಯಾಯಿತು ಮನಸ್ಸು
ದಾಟಿತು ಮನದ ಬೇಲಿ

ದನಿಯನರಸಿ ಆಲೈಸಿದೆ
ನೀರವತೆಯ ಹಿಂಬಾಲಿಸಿದೆ
ಕಂಡೆನಲ್ಲಿ ಬೆಳ್ಳಿಚುಕ್ಕಿ

ನಗುವಿನಲೆಯಲ್ಲಿ  ಮುಂದಾದೆ
ಪುಟ್ಟ ಚಂದ್ರಮನಿದ್ದ ನನ್ನೆದುರಿಗೆ
ಹಸುಗೂಸಾ ಆ ನಗು
ನಾನಾದೆ ಆಗ ಮಗು

4 comments: