ಭರವಸೆಯ ಭಾವ !
ಭಾವನೆಗಳ ಬೆನ್ನೇರಿ ಬಂತು
ಭಾವನ ತರಂಗ ।
ಅಲೆ ಅಲೆಯಲಿ ಹರಡುತಿದೆ
ಅದರ ಅಂತರಂಗ ।।
ಆಗಸದತ್ತ ನೋಡಿದೆನು
ಆಸೆಯ ಹೊತ್ತು ।
ಎಲ್ಲಿರುವದು ನನ್ನ ಭಾವ
ಈ ಹೊತ್ತು ।।
ಕಂಡಿದ್ದೊಂದು ಕರಿಮೋಡ
ಮನಸ ತುಂಬಾ ಕರಿಛಾಯೆ ।
ಇದೆಲ್ಲ ಯಾವ ಮಾಯೆ
ಅರಿಯದಾದೆ ನಾ ।।
ಚಿಗುರಿತೊಂದು ಬಯಕೆಯೊಂದು
ಈ ಪುಟ್ಟ ಮನಸಲಿ ।
ಮಳೆ ಬರುವುದೀಗ
ಮಳೆ ಬರುವುದು ।।
ಎಂದು ಕಾಣುವೆನಾ
ತಿಳಿ ನೀಲಿ ಆಕಾಶವನು ।
ಸಹನೆಯಿಂದ ಒಲುಮೆಯಿಂದ
ನಾ ಕಾಯುತಿರುವೆನು ।।