ಪ್ರೀತಿ !
ಎದುರುಬದಿರಿನಲ್ಲಿ ಕುಳಿತು ನೀಡುವ ಹೂಮುತ್ತೆ
ಜೊತೆಯಲ್ಲಿ ಮಾರು ದೂರ ಕೈ ಬೆಸುಗೆಯ ನಡಿಗೆಯೆ
ಒಬ್ಬರನ್ನೊಬ್ಬರು ಕಣ್ಣಲ್ಲಿ ಕಣ್ಣಿಟ್ಟು ನೋಡುವ ನೋಟವೇ
ನೀನಿಲ್ಲದೆ ನಾನಿಲ್ಲ ಎನ್ನುವ ಮಾತೆ
ಪ್ರೀತಿಯೆಂದರೇನು ?
ಕೇಳಿಕೊಂಡೆನು ನಾನು
ನನ್ನ ಮನದ ಮಾತಿಗೆ ಕಾದೆನು
ಒಗಟನೊಂದು ಬಿಡಿಸುವಂತಿದೆ ಈ ಮನವು
ಪ್ರೀತಿಗೆ ನೂರಾರು ಭಾವಗಳು
ನೂರಾರು ಅರ್ಥಗಳು
ಹುಡುಕುತ್ತಾ ಹೋದಾಗ ಒಂದು ಭಾವ
ಸುಮ್ಮನಿದ್ದರೆ ಮಗದೊಂದು ಭಾವ
ಜಾಣ ಮನಸು ಹೀಗೆ ಹೇಳಿತು
ಹುಡುಕಲು ಹೋಗಬೇಡ ಪ್ರೀತಿಯ ಮೂಲ
ಪ್ರೀತಿಸುತ್ತಾ ಹೋಗು ಅದೇ ಒಳಿತು
ಕಲಿಸುತ್ತದೆ ಎಲ್ಲವ ಕಾಲ!
ಜೊತೆಯಲ್ಲಿ ಮಾರು ದೂರ ಕೈ ಬೆಸುಗೆಯ ನಡಿಗೆಯೆ

ನೀನಿಲ್ಲದೆ ನಾನಿಲ್ಲ ಎನ್ನುವ ಮಾತೆ
ಪ್ರೀತಿಯೆಂದರೇನು ?
ಕೇಳಿಕೊಂಡೆನು ನಾನು
ನನ್ನ ಮನದ ಮಾತಿಗೆ ಕಾದೆನು
ಒಗಟನೊಂದು ಬಿಡಿಸುವಂತಿದೆ ಈ ಮನವು
ಪ್ರೀತಿಗೆ ನೂರಾರು ಭಾವಗಳು
ನೂರಾರು ಅರ್ಥಗಳು
ಹುಡುಕುತ್ತಾ ಹೋದಾಗ ಒಂದು ಭಾವ
ಸುಮ್ಮನಿದ್ದರೆ ಮಗದೊಂದು ಭಾವ
ಜಾಣ ಮನಸು ಹೀಗೆ ಹೇಳಿತು
ಹುಡುಕಲು ಹೋಗಬೇಡ ಪ್ರೀತಿಯ ಮೂಲ
ಪ್ರೀತಿಸುತ್ತಾ ಹೋಗು ಅದೇ ಒಳಿತು
ಕಲಿಸುತ್ತದೆ ಎಲ್ಲವ ಕಾಲ!